ಬಿಕ್ಕಿದ ಸಾಲುಗಳು-ಮೂರನೇ ಕಂತು
ಅವಳು ಹಿಡಿದ
ಛತ್ರಿಯ
ರಂಧ್ರಗಳಲ್ಲಿ
ತೂರಿ ಬರುತ್ತಿದ್ದ
ಕಾಮನಬಿಲ್ಲು
ನೆಲದ ಮೇಲೆ
ಹರಡಿಕೊಳ್ಳುತ್ತಿತ್ತು
ಬಣ್ಣವಿರಲಿಲ್ಲ
***
ಚಿಕ್ಕದೊಂದು ಪತ್ರದಲ್ಲಿ
ನನ್ನ ಹೆಸರು ಬರೆದು
ಕೆಳಗೆ ನಿನ್ನ ಪ್ರೀತಿಯ
ಎಂದು ಮೊಹರು ಒತ್ತಿ
ಎಲ್ಲೋ ಕಳೆದು ಹೋದ ಹೊತ್ತು
ಆಲಿಕಲ್ಲು, ಕರಗಿ ನೀರಾಗಲಿ
ಮತ್ತೆ ಮಳೆ ಬರಲಿ
****
ಕಣಿವೆಯಲ್ಲಿ
ನಡೆಯುತ್ತಿದ್ದೆ
ಗಾಢಾಂಧ ಕತ್ತಲು
ನನ್ನೊಳಗೂ ಇಲ್ಲದಂಥ
ದಿವ್ಯ ಮೌನ
ನಾನು ಹುಡುಕುತ್ತಿದ್ದುದು
ಸಿಕ್ಕಿತು ಎಂದು ತುಂಬಿಕೊಳ್ಳಲು
ಬೊಗಸೆ ಹಿಡಿದೆ
ಸಿಕ್ಕಿದ ಸಂಭ್ರಮದಲ್ಲಿ
ಬೆರಳುಗಳ ಮಧ್ಯೆ
ನುಸುಳಿದ್ದು ತಿಳಿಯಲಿಲ್ಲ
ಅಷ್ಟರವರೆಗೂ ಸುಮ್ಮನಿದ್ದ ಕತ್ತಲು
ಕೇಳಿತು, ಏನು ಪಡೆದೆ ?
ಒಂದಿಷ್ಟು ಮೌನ ಎಂದೆ
ಎಲ್ಲಿಂದ ಎಂದು ಮತ್ತೆ ಕೇಳಿತು
ನಿನ್ನಿಂದ ಅಂದೆ,
ಅದಕ್ಕೆ ಅದು
ಉತ್ತರ ಸರಿಪಡಿಸಿತು
ಶೂನ್ಯದಿಂದ !
***
Loading...
ಸಾಲುಗಳು ಚೆನ್ನಾಗಿವೆ. ಕೊನೆಯ ಪದ್ಯದ ಸಾಲುಗಳು ಇಷ್ಟವಾದವು.
ರಘುರಾಂ
raghuram - July 4, 2008 at 6:28 am
ಪ್ರಿಯ ನಾವಡರೇ,
ಬಿಕ್ಕಿದ ಸಾಲುಗಳು ತುಂಬ ಇಂಟರೆಸ್ಟಿಂಗ್ ಆಗಿವೆ.
ನೆಲದ ಮೇಲೆ ಹರಡಿಕೊಳ್ಳುತ್ತಿತ್ತು
ಬಣ್ಣವಿರಲಿಲ್ಲ,
ಆಲಿಕಲ್ಲು ಕರಗಿ ನೀರಾಗಲಿ
ಮತ್ತೆ ಮಳೆ ಬರಲಿ…
ಇಷ್ಟವಾದವು.
ವಂದನೆಗಳು,
ಸಿಂಧು
sindhu - July 4, 2008 at 7:42 am
ಸೊಗಸಾಗಿದೆ ಬಿಕ್ಕಿದ ಸಾಲುಗಳ ಬಣ್ಣ. ಇಷ್ಟವಾಯಿತು.
-ಜಿತೇಂದ್ರ
ಜಿತೇಂದ್ರ - July 4, 2008 at 9:19 am
ರಘುರಾಂ ಅವರಿಗೆ ಧನ್ಯವಾದ. ಹೀಗೇ ಬರುತ್ತಾ ಇರಿ.
ಸಿಂಧು ಮೇಡಂ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ಹೀಗೇ ಬರ್ತಾ ಇರಿ, ಹುರಿದುಂಬಿಸುತ್ತಿರಿ.
ಜಿತೇಂದ್ರ, ನಮಸ್ಕಾರ.
ನಾವಡ
navada - July 4, 2008 at 5:21 pm
ನಾವಡರೆ,
ಕವನ ತುಂಬಾ ಇಷ್ಟವಾಯಿತು.
sunaath - July 9, 2008 at 10:21 am