ಸಂವಾದ-೨
ಗಣೇಶ್ . ಕೆ. , ವಿನಾಯಕ ಮತ್ತು ಸಿರಿ ಪ್ರಶ್ನೆಗಳನ್ನು ಕೇಳಿ ಹಲವು ದಿನಗಳಾಗಿತ್ತು. ಆದರೆ ಚುನಾವಣೆಯಲ್ಲಿ ಮುಳುಗಿದ್ದರಿಂದ ಮೇಲಕ್ಕೆ ಬರಲು ಇಷ್ಟು ದಿನಗಳಾದವು. ತಡವಾಗಿದ್ದಕ್ಕೆ ವಿಷಾದವಿದೆ.
ಗಣೇಶ್ ಅವರು ಸಂಪಾದಕ, ಸುದ್ದಿ ಸಂಪಾದಕ, ಉಪ ಸಂಪಾದಕರ ಕೆಲಸದ ಬಗ್ಗೆ ಕೇಳಿದ್ದಾರೆ.
ಉ : ಪತ್ರಿಕೆ ಒಬ್ಬನೇ ಸಂಪಾದಕ ಮತ್ತು ಸುದ್ದಿ ಸಂಪಾದಕ, ಉಪ ಸಂಪಾದಕರು ಹಲವರು. ಹೀಗೊಂದು ಮಾತಿದೆ. ಯಾವಾಗಲೂ ಪತ್ರಿಕೆಗೆ ಒಬ್ಬ ಸಂಪಾದಕರಿರುತ್ತಾರೆ. ಅವರು ಪತ್ರಿಕೆಯ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತವರು. [...]
Archive for May, 2008
ಸಂವಾದ 2-ಪತ್ರಕರ್ತನಿಗೆ ಸಾಮಾನ್ಯಜ್ಞಾನ ಅವಶ್ಯ
Posted in ಸಂ-ವಾದ, tagged ಉಪ ಸಂಪಾದಕ, ಪತ್ರಿಕೋದ್ಯಮ, ರಿಪೋರ್ಟಿಂಗ್, ವರದಿಗಾರಿಕೆ on May 28, 2008 | 4 Comments »
ಹೊಳೆಯಲಿ ತಾರೆ !
Posted in ಪದ್ಯ, tagged ತಾರೆಗಳು, ನಿರೀಕ್ಷೆ on May 27, 2008 | 2 Comments »
ಆಗಸ
ನಿತ್ಯವೂ
ಕಾಯುತ್ತದೆ
ಸೂರ್ಯ
ಚಂದ್ರರಿಗಾಗಿ
ತಾರೆಗಳೂ ಅಷ್ಟೇ
ಕಾಯುವುದು
ನಿರಭ್ರ
ರಾತ್ರಿಗಾಗಿ
ಈ ನಿರೀಕ್ಷೆಯೂ
ಅಷ್ಟೇ
ಹೊಳೆದ ಆಗಸದಲ್ಲಿ
ಉಳಿದ ತಾರೆಗಳು
ಹೊಳೆಯುವವರೆಗೆ !
ಎರಡು ಹನಿಯ ಕಥೆಗಳು
Posted in ಕಥೆ, tagged ಕತ್ತಲೆ, ಬೆಳಕು, ಮರ, ಸಣ್ಣ ಕತೆ on May 18, 2008 | 10 Comments »
ಬೆಳಕು ಮತ್ತು ಕತ್ತಲೆ
ಬೆಳಕಿನ ಕುಡಿಯೊಂದು ಕಾಡನ್ನು ಸೀಳಿಕೊಂಡು ಮುನ್ನಡೆಯುತ್ತಿತ್ತು. ದಟ್ಟವಾದ ಕಾಡು, ಎಲ್ಲೆಲ್ಲೂ ಹಸಿರು. ಬೇಸಗೆಯಾಗಿದ್ದರೂ ಹಸಿರಿಗೆ ಕೊರತೆಯಿರಲಿಲ್ಲ. ಕೆಲವೆಡೆಯಂತೂ ಸೂರ್‍ಯನ ಬೆಳಕೇ ಬೀಳದಷ್ಟು ಕತ್ತಲೆ.
ಈ ಬೆಳಕಿನ ಕುಡಿಗೆ ಕಾಡೇನೂ ಹೊಸದಲ್ಲ. ಸಂಜೆಯಾಗುತ್ತಿದ್ದ ಸಮಯ. ನಿಂತ ಮರವೂ ನಿಂತಲ್ಲೇ ವಿಶ್ರಮಿಸಿಕೊಳ್ಳುವಂಥ ಕಾಲ. ತನ್ನೊಳಗೆ ಕಟ್ಟಿದ ಗೂಡುಗಳಲ್ಲಿ ಕಲರವ ಕೇಳುವ ಸಂಭ್ರಮದಲ್ಲಿ ಮುಳುಗುತ್ತಿತ್ತು. ಈ ಕುಡಿ ನಡೆದು ನಡೆದು ದಣಿವಾದಂತೆನಿಸಿತು. ಅಷ್ಟರಲ್ಲಿ ಒಂದು ಮಿಣುಕು ಹುಳು ಎದುರಾಯಿತು. ಕುಡಿಗೆ ಅಚ್ಚರಿ. ನನ್ನ ಹಾಗೆಯೇ ಇದ್ದೀ. ಆಗಾಗ ಹೊಳೆಯುತ್ತೀ, ನೀನ್ಯಾರು [...]
ಪತ್ರಿಕೆಯ ಸುದ್ದಿ ಮೂಲಗಳು- ಸಂವಾದ 1
Posted in ಸಂ-ವಾದ, tagged ಏಜೆನ್ಸಿ, ಪತ್ರಿಕೋದ್ಯಮ, ಸಂ-ವಾದ, ಸುದ್ದಿಮೂಲಗಳು on May 11, 2008 | 8 Comments »
ಭಾಗ ೧
ಸಂವಾದ ಆರಂಭವಾಗಿದೆ. ನಮ್ಮ ಭಾಗದಲ್ಲಿ ಮೊದಲ ಹಂತದ ಚುನಾವಣೆ ಇದ್ದದ್ದರಿಂದ ಹಲವರ ಪ್ರಶ್ನೆಗಳಿಗೆ ಉತ್ತರಿಸಲು ತಡವಾಯಿತು. ಇನ್ನು ತಡವಾಗುವುದಿಲ್ಲ.
ಶೆಟ್ಟರ ಮೊದಲ ಪ್ರಶ್ನೆ
ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಉತ್ತರ : ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.
ಬಹಳ [...]
ಸಂಬಂಧಗಳ ಸೊಗಸಾದ ಪೋಟ್ರೈಟ್ !
Posted in ಚಿತ್ರಪಟ, tagged ಇರಾನಿ ಫಿಲ್ಮ್, ಮಜಿದ್ ಮಜ್ದಿ, ಸಂಬಂಧಗಳು, children of heaven on May 6, 2008 | 17 Comments »
ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಸುಪ್ರೀತ್ ಚಿಲ್ಡ್ರನ್ ಆಫ್ ಹೆವನ್ (ಮಜಿದ್ ಮಜ್ದಿ) ಚಿತ್ರದ ಬಗ್ಗೆ ಹೇಳಿದ್ದಾರೆ. ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ. ಇತ್ತೀಚೆಗೆ ನನ್ನನ್ನು ತೀರಾ ಬಾಧಿಸಿದ ಚಿತ್ರವದು.
ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು [...]
ಸಂ-ವಾದ ಆರಂಭ
Posted in ಸಂ-ವಾದ, tagged ಚರ್ಚೆ, ಪತ್ರಿಕೋದ್ಯಮ, ಸಂ-ವಾದ on May 2, 2008 | 11 Comments »
ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.
ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ [...]
