ಬಿಕ್ಕಿದ ಸಾಲುಗಳು-ಮತ್ತೊಂದು ಕಂತು
ಆಗಸದಲ್ಲಿ ಚಂದಿರ
ಬಂದಿದ್ದಾನೆ
ಅಂಗಳದಲ್ಲಿ ಮಲ್ಲಿಗೆ
ಅರಳಿದೆ
ಅವಳ ಕಾಯುವಿಕೆಯಲ್ಲಿ
ಕಣ್ಣುಗಳು
ಸೋತಿವೆ
ಇನ್ನು ಕಣ್ಣು ಮುಚ್ಚುತ್ತೇನೆ
ಕನಸಿನಲ್ಲಾದರೂ
ಆಕೆಯ ಹೆಜ್ಜೆ ತೋರಬಹುದು !
***
ಬೆಳಕು
ಪಡೆದವರೆಲ್ಲಾ
ಮೋಹಿಗಳಾದರು
ಅದ ನೀಡಿದವ ಮಾತ್ರ
ನಿರ್ಮೋಹಿಯಾಗಿಯೇ
ಉಳಿದ
***
ಗುಲಾಬಿ ತೋಟದ
ಹುಡುಗಿ
ಮುಳ್ಳನ್ನೇ
ಹೊದ್ದು ಬಂದಳು
ಅವಳಿಗಾಗಿ
ಆತ
ಮುಳ್ಳನ್ನೇ ಪ್ರೀತಿಸಿದ !
***
ನನ್ನ
ಬೊಗಸೆ ತುಂಬಾ
ನಿರೀಕ್ಷೆಗಳ
ಮೊಗ್ಗುಗಳಿವೆ
ಪರಿಮಳಿಸಲು
ಅವಳ ಒದ್ದೆ ಕಣ್ಣುಗಳ
ಪ್ರೀತಿ ಬೇಕು
***
ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ
***
ಸೊಗಸಿಗೆ
ಉದಾಹರಣೆಯಾಗಿ
ನಿಂತವಳ
ಕಣ್ತುಂಬಿಕೊಳ್ಳುವೆ
ಮತ್ತೇನನ್ನೂ
ನೋಡುವುದಿಲ್ಲ !
Loading...
ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೆ
ಗೆಜ್ಜೆ ಕಟ್ಟುತ್ತೇನೆ
- Wah NavaDArE, nAnantU nimma fan agibiTTiruve!!
- Chetana
chetana chaitanya - April 24, 2008 at 4:41 am
ಹೌದು, ಗೆಜ್ಜೆ ಕಟ್ಟುವ ಪ್ರತಿಮೆ ಹಾಗೆಯೇ ಬೆಳಕು ನೀಡಿದವನ ನಿರ್ಮೋಹದ ಭಾವ, ತುಂಬ ಸುಂದರ ಕಲ್ಪನೆಗಳು.
chakora - April 24, 2008 at 6:13 am
YOOHOOOOO!!!
ಇವತ್ ನೋಡಿ ನಾವಡರೆ, ಮುಗ್ಯಾಂಬೋ ಖುಶ್ ಹುವಾ. ಆಮೇಲೆ ಇದಕ್ಕೆ ಬಿಕ್ಕಿದ ಸಾಲುಗಳು ಅನ್ನೋ ಟೈಟಲ್ಲು ಸುತರಾಂ ಹೊಂದಲ್ಲ. ಈ ಕವಿತೆಯ ಯಾವುದಾದರು ಸಾಲನ್ನೆ ಆಯ್ದುಕೊಂಡರೇನೆ ಚೆನ್ನಾಗಿರತ್ತೆ ಅನ್ನಿಸ್ತು.
-ಟೀನಾ.
Tina - April 24, 2008 at 9:35 am
ಚೇತನಾ ಮತ್ತು ಚಕೋರರಿಗೆ
ನಮಸ್ಕಾರ. ನಿಮ್ಮ ಅಭಿಮಾನದ ನುಡಿಗೆ ಧನ್ಯವಾದ.ಪ್ರೀತಿ ಇರಲಿ. ಹೀಗೇ ಬರ್ತಾ ಇರಿ.
ಟೀನಾರೇ,
ನಿಮ್ಮ ಆದೇಶ ಪಾಲಿಸಿದ್ದೇನೆ. ನಿಮಗೆ ಖುಷಿಯಾದರೆ ನನಗೂ ಖುಷಿ. ಬಿಕ್ಕಿದ ಸಾಲುಗಳು ಎಂದು ಇಟ್ಟಿದ್ದಕ್ಕೆ ಒಂದೇ ಕಾರಣ-ಇವು ಪ್ರತ್ಯೇಕ ಪದ್ಯಗಳಾಗುವ ಹಂಬಲದಿಂದ ಹೊರಟು ಅಲ್ಲಿಗೇ ನಿಂತವು. ಅದಕ್ಕೇ ಹಾಗೆ ಕರೆದೆ. ನೀವು ಹೇಳಿದ ಸಲಹೆನೂ ಇಷ್ಟವಾಯಿತು. ಮೇಡಮ್, ಹೀಗೇ ಆರ್ಡರ್ ಮಾಡ್ತಾ ಇರಿ…
ನಾವಡ
navada - April 24, 2008 at 10:11 am
ಬಿಕ್ಕಳಿಕೆಯ ಎಲ್ಲ ಸಾಲುಗಳೂ ಖುಷಿಕೊಟ್ಟವು ನಾವಡ್ರೇ,
ಅದರಲ್ಲೂ ಇದು ಸುಪರ್ಬ್
ಇನ್ನು ಕಣ್ಣು ಮುಚ್ಚುತ್ತೇನೆ
ಕನಸಿನಲ್ಲಾದರೂ
ಆಕೆಯ ಹೆಜ್ಜೆ ತೋರಬಹುದು
venuvinod.k.s - April 24, 2008 at 10:33 am
ಎಲ್ಲ ಸಾಲುಗಳು ಚಂದ ಇವೆ. ಖುಶಿಯಾಯ್ತು ಓದಿ.
’ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ ’
ಸಖತ್
ಮನಸ್ವಿನಿ - April 24, 2008 at 3:25 pm
ನಾವಡ,
ಆಗೀಗ ಗಜಲ್- ಶಾಯರಿಗಳನ್ನೋದುವ ನನಗೆ ಅವು ಉಂಟುಮಾಡುವ ಭಾವುಕತೆಯನ್ನೇ ಈ ನಿಮ್ಮ ಸಾಲುಗಳು ತಂದುಕೊಟ್ಟವು. ನಿರಂತರ ಪ್ರವಾಸ, ಉಪನ್ಯಾಸಗಳ ನಡುವೆ ಇಂಥ ಓದು ಒಂದು ಅದ್ಭುತ ಫೀಲ್.
’ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ ’
ನಿಮ್ಮ ಹಾಡಿನ ಜಾಡು ಹರಿಯುವ ಬಗೆಗೆ ಗೆಜ್ಜೆ ಕಟ್ಟಬೇಕು!
ವಂದೇ,
ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ - April 25, 2008 at 5:56 am
ವೇಣು, ಮನಸ್ವಿನಿ, ಚಕ್ರವರ್ತಿಯವರಿಗೆ ಧನ್ಯವಾದ. ನಿಮ್ಮ ಅಭಿಪ್ರಾಯ ಪದ್ಯ ಬರೆಯುವ ನನ್ನ ಉತ್ಸಾಹಕ್ಕೆ ಗೆಜ್ಜೆ ಕಟ್ಟಿತು.
ನಾವಡ
navada - April 25, 2008 at 8:45 am
ಬಹಳ ಚೆನ್ನಾಗಿ ಬರೆದಿದ್ದೀರಿ. ಓದಿ ಖುಷಿಯಾಯ್ತು.
sunaath - April 28, 2008 at 9:32 am
ಸುನಾಥ ಕಾಕಾರಿಗೆ
ನಮಸ್ಕಾರ. ನಿಮ್ಮ ಬೇಂದ್ರೆಯೆಂಬ ಸಂಪಿಗೆಯ ಪರಿಮಳವನ್ನು ಘಮಘಮಿಸುತ್ತಿರುವುದು ಕಂಡು ಖುಷಿಯಾಯಿತು. ನನ್ನ ಬಿಕ್ಕಿದ ಸಾಲುಗಳಿಗೆ ನೀಡಿದ ಅಭಿಪ್ರಾಯ ಸಹ ಹುಮ್ಮಸ್ಸು ತುಂಬಿತು. ಧನ್ಯವಾದ.
ನಾವಡ
navada - April 28, 2008 at 10:04 am
ಸಖತ್ ಸಾಲುಗಳು!! ಇಲ್ಲಿ ಬರೆದಿರೋ ಮಿಕ್ಕ ಹಲವರಂತೆ ನಂಗೂ ಗೆಜ್ಜೆ ಸಾಲು ತುಂಬಾಆಆಆ ಇಷ್ಟ ಆಯ್ತು
ಶ್ರೀ - April 30, 2008 at 6:19 pm
ಶ್ರೀಯವರೇ,
ಮೆಚ್ಚಿದ್ದಕ್ಕೆ ಧನ್ಯವಾದ.
ನಾವಡ
navada - May 1, 2008 at 5:53 am
navada adbuta maraya,tooooooo gooooood loves u r blogs man they r all natural soooo real.wow thanks fr introducing me to the new world.
love
murali
murali - May 3, 2008 at 5:46 am
navad odde kannugala preeti sudhasharma chavatthi yavara modala kavana sankalana.adu nannanna bahala kadisittu.adralli oddekannugala preeti ennuva kavana beautifull.mattada salugalanna ninna ninna kavitheyalli odidaga 10varsha hinde hogibittiddene.
love
murali
murali - May 3, 2008 at 5:53 am
ಮುರಳಿ,
ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಥ್ಯಾಂಕ್ಸ್.ಅಭಿಪ್ರಾಯಿಸಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್. ನೀನು ಹೇಳಿದ್ದು ನಿಜ.ಸುಧಾ ಶರ್ಮರ ಆ ಕವನ ನನಗೂ ಖುಷಿ ಕೊಟ್ಟಿದೆ. ಆ ಒದ್ದೆ ಕಣ್ಣುಗಳು ಎನ್ನವುದರಲ್ಲೇ ಒಂದು ಲವಲವಿಕೆಯಿದೆ. ಹೀಗೆ ಬರ್ತಾ ಇರು.
ನಾವಡ
navada - May 3, 2008 at 11:53 am