ಬಿಕ್ಕಿದ ಸಾಲುಗಳು
ಕಡಲ ಪ್ರೀತಿಸಿದವಳ
ಕಣ್ಣಹನಿಗೆ
ಬೆಲೆಯೇ ಇಲ್ಲ !
***
ಅವಳು
ಮುತ್ತಾಗಬೇಕಾದವಳು
ಕಡಲಿನ ಚಿಪ್ಪಿನೊಳಗೆ
ಸಿಕ್ಕು
ಮೌನವಾಗಿದ್ದಾಳೆ !
***
ಬಾಳ ಮೆರವಣಿಗೆಯಲ್ಲಿ
ಸೇರಿಕೊಂಡವರೆಷ್ಟು ಮಂದಿ
ಸೊಗಸು-ಸಂಭ್ರಮ ತುಂಬಿದವರೆಷ್ಟು ಜನ
ಲೆಕ್ಕಕ್ಕಿಲ್ಲ
ಎಣಿಸಲು ಹೋದಾಗಲೆಲ್ಲಾ
ಲೆಕ್ಕ ತಪ್ಪುತ್ತೇನೆ
***
ಬದುಕಿನ ಅಂಬರದಲ್ಲಿ
ಹಾರುತ್ತಿರುವ ಗಾಳಿಪಟಕ್ಕೆ
ಸಂಬಂಧದ ದಾರ ಅದೆಷ್ಟು ಉದ್ದ
***
ಮೌನಿ
ಆಕೆ
ಕಡ ತಂದ
ಮಾತುಗಳನ್ನಾಡದೇ
ಕುಸಿದು ಬಿದ್ದಳು
ಈಗ ಅವಳ
ಬಗ್ಗೆಯೇ
ಉಳಿದವರೆಲ್ಲಾ
ಮಾತನಾಡುತ್ತಾರೆ !
( ಇವೆಲ್ಲವೂ ಪ್ರತ್ಯೇಕ ಪದ್ಯವಾಗಲು ಹುಟ್ಟಿಕೊಂಡವು. ಆದರೆ ಮಧ್ಯೆಯೇ ಶ್ರುತಿ ಸರಿಮಾಡಿ ಕೊಳ್ಳುವ ಸಂಗೀತಗಾರನ ಸ್ವರದಂತೆ ಬೇರೆ ಬೇರೆಯಾಗಿವೆ.ಮುರಿದು ಬಿದ್ದ ಪದ್ಯಗಳು ಬಿಕ್ಕಿದ ಸಾಲುಗಳಿವು)
Loading...
ಮೌನಿ
ಆಕೆ
ಕಡ ತಂದ
ಮಾತುಗಳನ್ನಾಡದೇ
ಕುಸಿದು ಬಿದ್ದಳು
ಈಗ ಅವಳ
ಬಗ್ಗೆಯೇ
ಉಳಿದವರೆಲ್ಲಾ
ಮಾತನಾಡುತ್ತಾರೆ !
ಈ ಸಾಲುಗಳು ಅದ್ಭುತ. ಮುರಿದು ಬಿದ್ದ ಪದ್ಯಗಳು ಎದ್ದು ನಿ೦ತು ಹೊಸದಾದ ಅರ್ಥ ಹುಟ್ಟುಹಾಕಲು ಪ್ರಯತ್ನಿಸಿದ೦ತಿವೆ.
sudhesh - March 21, 2008 at 6:27 pm
ನಾವಡರೆ…
ಸಾಲುಗಳು ಸಂಪೂರ್ಣ ಅರ್ಥ ನೀಡುತ್ತ ಹನಿ ಹನಿಯಾಗಿ ಸೇರಿ ಹರಿಯುತ್ತಿವೆಯಲ್ಲ.
ಅದ್ಭುತ ಅರ್ಥಗಳಿವೆ ಸಾಲುಗಳಲ್ಲಿ.
ಹೀಗೆಯೇ ಸಾಲುಗಳ ಹರಿಬಿಡಿ ನಮ್ಮೆಡೆಗೆ, ಓದುತ್ತಿರುತ್ತೇವೆ.
ಶಾಂತಲಾ ಭಂಡಿ - March 21, 2008 at 9:02 pm
namastE navaDarE,
ee kADuva sAlugaLanna sogasAgide annOdu hEge?
bahaLa taTTitu manasige. chenda bareeteera neevu.
- Chetana Teerthahalli
chetana chaitanya - March 22, 2008 at 4:40 am
ಬಿಕ್ಕಿದ ಸಾಲುಗಳನ್ನು ಮೆಚ್ಚಿಕೊಂಡ ಸುಧೇಶ್, ಶಾಂತಲಾ, ಚೇತನಾರಿಗೆ ಧನ್ಯವಾದಗಳು.
ನಾವಡ
navada - March 22, 2008 at 10:48 am
ಬಿಕ್ಕಿದ ಸಾಲುಗಳು ಅದಮ್ಯ…
madhuramanase - March 23, 2008 at 11:43 am
ಮಧುಗೆ ಥ್ಯಾಂಕ್ಸ್.
ನಾವಡ
navada - March 24, 2008 at 11:00 am
ನಾವಡರೇ,
ಎಲ್ಲವೂ ಚೆನ್ನಾಗಿವೆ. ನನಗೆ ವಿಶೇಷವಾಗಿ ಕೆಳಗಿನ ಹನಿ ತುಂಬಾ ಇಷ್ಟವಾಯಿತು.
ಅವಳು
ಮುತ್ತಾಗಬೇಕಾದವಳು
ಕಡಲಿನ ಚಿಪ್ಪಿನೊಳಗೆ
ಸಿಕ್ಕು
ಮೌನವಾಗಿದ್ದಾಳೆ !
ಕೊನೆಯ ಹನಿಯಲ್ಲಿರುವ ’ಕಡ ’ ಊರಿನ ನೆನಪು ತಂದಿತು. ’ಕಡ’ ಅನ್ನೋ ಪದ ನಮ್ಮ ಕಡೆ ಜಾಸ್ತಿನೇ ಬಳಕೆಯಾಗುತ್ತೆ.
ಅಂದಹಾಗೆ, ನಿಮ್ಮನ್ನು ಬ್ಲಾಗಿಗರ ಕೂಟದಲ್ಲಿ ಗುರುತಿಸಲಾಗಲಿಲ್ಲ. ನಿಮ್ಮ ಚಂಡೆಮದ್ದಳೆ ನಂಗೆ ಕೇಳಿಸಲೇ ಇಲ್ಲ
ಮನಸ್ವಿನಿ - March 25, 2008 at 2:20 pm
ಮನಸ್ವಿನಿಯವರೇ,
ಧನ್ಯವಾದ. ಬ್ಲಾಗಿಗರ ಕೂಟದಲ್ಲಿ ನೀವೂ ವನಸುಮದಂತೆಯೇ, ಇದ್ದಿರಿ. ಅದಕ್ಕೆ ಗೊತ್ತಾಗಲಿಲ್ಲ. ಜತೆಗೆ ನನ್ನ ಚಂಡೆಮದ್ದಳೆ ವಾಲ್ಯೂಮ್ ಕಡಿಮೆಯಿತ್ತು.
ಶ್ರೀ ಯವರ ಪೋಸ್ಟ್ ನಲ್ಲಿ ನಿಮ್ಮ ಪ್ರತಿಕ್ರಿಯೆ ಕಂಡಾಗ ನೀವು ಬಂದದ್ದು ತಿಳಿಯಿತು. ಮತ್ತೊಮ್ಮೆ ಸಿಗೋಣ. ಬ್ಲಾಗ್ ಕಡೆ ಬರ್ತಾ ಇರಿ.
ನಾವಡ
navada - March 27, 2008 at 10:26 am