ಸದ್ದು …!
ಮೌನದೊಳಗೆ
ಮಧುರ ಸ್ವರ
ಕುಳಿತು
ಮಾತನಾಡಿಸುವ ಹೊತ್ತು
ಅಂಗಳದಲ್ಲಿ ಮಲ್ಲಿಗೆಯೊಂದು
ಅರಳಿತು ; ಸದ್ದಾಗಲೇ ಇಲ್ಲ !
ಸೂರ್ಯ ಕಂತಿ
ಕೆಂಪು ಹರಡಿ
ತಿಳಿಯಾಗುವಾಗ ಬಾನಿನಲ್ಲಿ
ಚಂದಿರ ನಗುತ್ತಾ ಬಂದ ;
ಆಗಲೂ ಸದ್ದಾಗಲಿಲ್ಲ !
ಮಧುರ ಸ್ಮೃತಿಯ
ಮೆರವಣಿಗೆಯಲ್ಲಿ
ಆನೆ ಅಂಬಾರಿಯ ಮೇಲೆ
ಅವಳು
ಧರಿಸಿದ್ದ ಮೌನದ
ನತ್ತು ಫಳಫಳಿಸುತ್ತಿತ್ತು
ಆಗಲೂ ಅಷ್ಟೇ, ಸದ್ದಾಗಲಿಲ್ಲ !
ಅವನು ಬಂದ
ಅವಳೊಡನೆ ಕುಳಿತ-ಕಲೆತ
ಮೆರವಣಿಗೆ ಅಷ್ಟು ದೂರ
ಸಾಗಿತು
ಜನರ ಸಂತೆ ಹೆಚ್ಚಾಯಿತು
ಬಹುಪರಾಕುಗಳ ಅಬ್ಬರ
ಮುಗಿಲಿಗೆ ಮುಟ್ಟಿತು
ಚಂದಿರ ಗಹಗಹಿಸಿ ನಕ್ಕ
ಜನರೂ ಸುಮ್ಮನಿರಲಿಲ್ಲ
ದನಿಗೂಡಿಸಿದರು
ಕನಸು ಮುರಿದು ಹೋಗುವಾಗ
ಸದ್ದಾಯಿತು ; ಕೇಳಿಸಲೇ ಇಲ್ಲ !
Loading...
ಬಹಳ ಚೆಂದವಿದೆ ಕವಿತೆ
- ಚೇತನಾ
chetanachaitanya - March 3, 2008 at 6:56 am
ಚೇತನಾರೇ,
ಪದ್ಯ ಬರೆಯುವ ಪ್ರಯತ್ನವನ್ನು ಈಗಲಷ್ಟೇ ಆರಂಭಿಸಿದ್ದೇನೆ. ಪ್ರೋತ್ಸಾಹಕ್ಕೆ ಧನ್ಯವಾದ.
ನಾವಡ
navada - March 3, 2008 at 6:03 pm
ನಾವಡರೆ,
ಆರಂಭದ ಪ್ರಯತ್ನ ಅನ್ನುತ್ತೀರಿ. ನಿಮ್ಮ ಕವಿತೆಗೆ ಆ ಲೇಬಲ್ಲಿನ ಅವಶ್ಯಕತೆಯೆ ಇಲ್ಲ. ನಾನಂತು ಓದಿ ಫುಲ್ ಖುಶ್! ಇಷ್ಟರತನಕ ನಿಮ್ಮ ಗದ್ಯದ ಹೃದ್ಯತೆಯನ್ನ ಸವಿಯುವುದಾಗಿತ್ತು..ಇನ್ನು ಕವಿತೆಗಳೂ ಬರುತ್ತವೆ ಅಂದಮೇಲೆ ಹೇಳಬೇಕೆ?
-ಟೀನಾ.
Tina - March 4, 2008 at 3:50 am
ಟೀನಾರೇ,
ಏನೇ ಹೇಳಿ. ಕವಿತೆ ವಿಷಯದಲ್ಲಿ ನಿಮ್ಮೆಲ್ಲರ ಮುಂದೆ ನಾನು ಎಲ್.ಬೋರ್ಡ್. ನಿಮ್ಮ ಮೆಚ್ಚುಗೆಗೆ ಧನ್ಯವಾದ. ಪದ್ಯದ ಪ್ರಯತ್ನ ಮುಂದುವರಿಯುತ್ತೆ?!
ನಾವಡ
navada - March 4, 2008 at 7:16 am
ಕನಸು ಮುರಿದು ಹೋಗುವಾಗ
ಸದ್ದಾಯಿತು ; ಕೇಳಿಸಲೇ ಇಲ್ಲ !
ಅಬ್ಬ!
ಚಂದದ ಕವಿತೆ. ಖುಶಿಯಾಯ್ತು. ಬರೆಯುತ್ತಿರಿ. ನಾವೆಲ್ಲ ಇದ್ದೇವೆ ಓದ್ಲಿಕ್ಕೆ.
ಮನಸ್ವಿನಿ - March 4, 2008 at 3:06 pm
ನಾವುಡರೇ,
ಪ್ರವೇಶ ಚನ್ನಾಗಿ ಆಗಿದೆ. ಸದ್ಯಕ್ಕಂತೂ ಮಂಗಳ ಹಾಡಬೇಡಿ. ಪ್ರೇಕ್ಷಕರಿದ್ದೇವೆ!
‘ಶ್ರೀಪ್ರಿಯೆ’
shreepriye - March 4, 2008 at 7:19 pm
ನಾವಡ ಅವರೆ…
ಅದೆಷ್ಟು ಚೆನ್ನಾಗಿ ಬರೆಯುತ್ತೀರಾ ಸ್ವಾಮಿ ನೀವು! ಸದ್ದಿಲ್ಲದೇ ಮಾತಾಡುವ ಕವನಗಳು! ಅಬ್ಬಾ ಅದೆಷ್ಟು ಸುಂದರ ಸಾಲುಗಳು.
ಶಾಂತಲಾ ಭಂಡಿ - March 5, 2008 at 3:34 am
“ಕನಸು ಮುರಿದು ಹೋಗುವಾಗ
ಸದ್ದಾಯಿತು ; ಕೇಳಿಸಲೇ ಇಲ್ಲ !”
ಚೆನ್ನಾಗಿವೆ ಈ ಸಾಲುಗಳು, ಅರ್ಥಪೂರ್ಣ.
ಸುಪ್ತದೀಪ್ತಿ - March 5, 2008 at 6:10 am
ಮನಸ್ವಿನಿ, ಶಾಂತಲಾ, ಶ್ರೀಪ್ರಿಯೆ, ಸುಪ್ತದೀಪ್ತಿ- ಎಲ್ಲರ ಅಭಿಪ್ರಾಯಕ್ಕೆ ಧನ್ಯವಾದಗಳು.
ನಾವಡ
navada - March 5, 2008 at 10:02 am
Nieevu bareva reethi tumba tumba muddaagide..padagala jodane adbhutavaagide…
Nanna putaani blog
http://www.navilagari.wordpress.com
idakke nimma blaag rolnalli swalpa jaaga kodi:)
Nimma somu
somu - March 5, 2008 at 6:25 pm
ನಿಶ್ಶಬ್ದ ಕಾವ್ಯ! ಸೊಗಸಾಗಿದೆ.
sunaath - March 8, 2008 at 10:42 am
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ, ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದ. ಮತ್ತೆ ಮತ್ತೆ ಬರುತ್ತಿರಿ.
ನಾವಡ
navada - March 8, 2008 at 6:39 pm