ಕನಸಾಗಿ ಹೋದ
ಕಣ್ಣ ತುಂಬಾ
ಕನಸುಗಳನ್ನು ಕಟ್ಟಿಕೊಂಡ
ಚೆಲುವಿ
ಕೂತಿದ್ದಾಳೆ
ಧ್ಯಾನಾವಸ್ಥೆಯಲ್ಲಿ
ಚಕ್ಕಮಕ್ಕಳ ಭಂಗಿ
ಚೋರನೊಬ್ಬ
ಬಂದ
ಆ ಕನಸುಗಳನ್ನು
ಧ್ಯಾನಿಸುತ್ತಾ
ಮೋಹಗೊಂಡ
ತನ್ನ ಮನದ ಮಾತುಗಳನ್ನೆಲ್ಲಾ
ಅಂಗಳದಲ್ಲಿ ಹರವಿದ
ಆಕೆ ಕಣ್ಣು ತೆರೆಯಲಿಲ್ಲ
ನಿನ್ನ ಕನಸುಗಳಿಗೆ
ಜೀವವಾಗುತ್ತೇನೆ
ಎಂದು ಭರವಸೆ ಕೊಟ್ಟ
ಆಗಲೂ ಆಕೆ
ಅದೇ ಅವಸ್ಥೆಯಲ್ಲಿ
ಮರುಕ್ಷಣ
ಚೋರ
ಅವಳ ಕನಸುಗಳಾಗಿ ಬಿಟ್ಟ
ಪಕ್ಕನೆ ಕಣ್ತೆರೆದಳು
ಚೆಲುವಿ
ಅವನ
ಕನಸುಗಳಷ್ಟೇ ಇತ್ತು, ಚೆಲುವನಿರಲಿಲ್ಲ !
Loading...
ಅಯ್ಯೋ…!
ಇಡಿಯ ಕವಿತೆಯ ಸಾರ್ಥಕತೆ ಕಡೆಯ ಚರಣದಲ್ಲಿ.
ಒಳ್ಳೆಯ ಕವಿತೆ.
- ಚೇತನಾ ತೀರ್ಥಹಳ್ಳಿ
chetanachaitanya - February 18, 2008 at 3:16 pm
ಉಹ್… ಕನಸಿನಿಂದ ಹೊರ ಬರಬಾರದಿತ್ತು
ಚೆನ್ನಾಗಿದೆ ಕವನ.
-ಅವಿನಾಶ್
Avi - February 19, 2008 at 3:37 am
ಪಾಪ..ಚೆಲುವಿಯ ಕನಸು ನನಸಾಗದಿದ್ದುದು ಕಂಡು ತುಂಬಾ ಸಂಕಟವಾಯಿತು. ಆಕೆ ಕಣ್ತೆರೆಯದಿದ್ದಿದ್ದರೇ ಒಳ್ಳೆಯದಿತ್ತೇನೋ!?
ತೇಜಸ್ವಿನಿ ಹೆಗಡೆ - February 19, 2008 at 5:16 am
ಚೇತನಾರೇ,
ನಿಮ್ಮ ನುಡಿಗೆ ಧನ್ಯವಾದ. ಆದರೆ “ಅಯ್ಯೊ’ ಎನ್ನುವುದರ ಅರ್ಥ ಗೊತ್ತಾಗಲಿಲ್ಲ.
ಅವಿನಾಶ್, ತೇಜಸ್ವಿನಿ ಹೆಗಡೆಯವರಿಗೆ,
ಪದ್ಯವನ್ನು ಬ್ಲಾಗ್ ಗೆ ಹಾಕಿ ಎಷ್ಟೋ ಹೊತ್ತಾದ ಮೇಲೆ ನನಗೂ ಹಾಗೆಯೇ ಅನಿಸಿತು. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
ನಾವಡ
navada - February 19, 2008 at 7:56 am
ಚೆಲುವಿ ಕಣ್ತೆರೆಯಲು ಕನಸುಗಳು ಕಾರಣವಾಯಿತು. ಚೆಲುವಿಯ ಕನಸಾಗುತ್ತಾ ಚೋರ ‘ಚೆಲುವ’ನಾದ… ಕಣ್ತೆರೆದದ್ದು ಒಳ್ಳೆಯದೇ ಆಯಿತು.
ತನ್ ಹಾಯಿ - February 19, 2008 at 10:26 am
ಕಂಡ ಚೆಲುವಿಗಿಂತ ಕಾಣದಿರುವ ಚೆಲುವೇ ಹಿತವಲ್ಲವೇ! ಪದ್ಯ ಚೆನ್ನಾಗಿದೆ. ಕಥೆಯ ನಡುವೆ ಬಿಡುವು ಮಾಡಿಕೊಂಡು ಹೀಗೆ ಕವಿತಾಳನ್ನೂ ಮಾತನಾಡಿಸುತ್ತಿರಿ…
shashi sampalli - February 19, 2008 at 6:00 pm
ನಾವಡರೇ…
ತಪೋಭಂಗವಾಯ್ತು ಅನಿಸುತ್ತೆ. ಅವಳು ಕಣ್ ಬಿಡಬಾರದಿತ್ತೇನೋ.
ಅರ್ಧ ತಪಸ್ಸಿಗೆ ಅರೆಫಲವೇ ತಾನೇ ಲಭ್ಯ!
ಶಾಂತಲಾ - February 19, 2008 at 8:32 pm
ನನ್ನ ‘ಅಯ್ಯೋ’ -
ಪಕ್ಕನೆ ಕಣ್ತೆರೆದಳು
ಚೆಲುವಿ
ಅವನ
ಕನಸುಗಳಷ್ಟೇ ಇತ್ತು, ಚೆಲುವನಿರಲಿಲ್ಲ !
ಸಾಲುಗಳಿಗೆ. ತೀರ ’ಕಲಕುವ’ ಸಾಲುಗಳವು.
-ಚೇತನಾ
chetanachaitanya - February 20, 2008 at 4:56 am
ತನ್ ಹಾಯಿ ಅವರಿಗೆ
ಮೆಚ್ಚುಗೆ ನುಡಿಗಾಗಿ ಧನ್ಯವಾದ.
ಶಾಂತಲಾರೇ,
ನಿಮ್ಮ ಪ್ರತಿಕ್ರಿಯೆಯೇ ಚೆನ್ನಾಗಿದೆ. ಅರ್ಧ ತಪಸ್ಸಿಗೆ ಅರೆಫಲವೇ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.
ಚೇತನಾರೇ,
ನಿಮ್ಮ ಅಯ್ಯೊ ಅರ್ಥವಾಯಿತು. ಧನ್ಯವಾದ.
ನಾವಡ
navada - February 20, 2008 at 7:45 am