ಮತ್ತೊಂದು ಪದ್ಯ
ಅವಳು ಪ್ರೀತಿಸಿದ್ದು
ಸಮುದ್ರವನ್ನೇ
ಆಲಿಂಗಿಸಿದ್ದು
ಅನುಭವಿಸಿದ್ದು
ಎಲ್ಲವೂ
ಅವಳ ಅವನು
ಮತ್ತೆ ಮತ್ತೆ
ಹೊತ್ತು ತರುತ್ತಾನೆ ದಡಕ್ಕೆ
ಅವಳೋ ನಾಚಿಕೊಳ್ಳುತ್ತಾಳೆ
ಮತ್ತೆ ಕರೆದೊಯ್ಯುತ್ತಾನೆ
ಬಂದು ಹೋದ ನೆನಪಿಗಿಷ್ಟು
ರೇವು, ಅದರೊಳಗೆ
ಮತ್ತಷ್ಟು ಕಪ್ಪೆ ಚಿಪ್ಪು ತಂದು
ಸುರಿಯುತ್ತಾನೆ
ಬೇಕಾದ್ರೆ ಚಿಪ್ಪು ಇಟ್ಟುಕೊಳ್ಳಿ
ಆ ಒದ್ದೆ ರೇವಿನ ಮೇಲೆ
ಏನೂ ಬರೆಯಬೇಡಿ
ಅವರ ಬಗ್ಗೆ ಸಹ
ಅವನು ಪುನಾ ಬಂದು ಅಳಿಸುತ್ತಾನೆ !
(ನನ್ನನ್ನು ಸದಾ ಕಾಡುವ ಇಮೇಜ್ ಗಳೆಂದರೆ ಕಡಲು ಮತ್ತು ಸಾವು. ಈ ಸಾಲುಗಳನ್ನು ಯಾವ ವರ್ಗಕ್ಕೆ ಸೇರಿಸಬೇಕೆಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು)
Loading...
ನಾವಡರೇ,
ಪದ್ಯ ತುಂಬಾ ಚೆನ್ನಾಗಿದೆ. ಹೀಗೆ ಬರೀತಾ ಇರಿ. ಅಂದ ಹಾಗೆ ನಿಮಗೆ ಶಾಸ್ತ್ರೀಯ ಸಂಗೀತದಲ್ಲಿ ತುಂಬಾ ಆಸಕ್ತಿ ಇದೆಯಾ?
~ಮಧು
madhu - February 11, 2008 at 5:57 pm
ಮಧು ಅವರೇ,
ಪದ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ. ಹೌದು, ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಕೊಂಚ ಒಲವು ಜಾಸ್ತಿ. ನಿಮಗೂ ಸಹ ?
ನಾವಡ
navada - February 11, 2008 at 6:14 pm
ನನಗೂ ಸ್ವಲ್ಪ ಜಾಸ್ತಿನೇ ಹುಚ್ಚು ಇದೆ. ಬ್ಲಾಗಲ್ಲಿ ಸಾಧ್ಯವಾದ್ರೆ ಬರೀಬೇಕು ಅಂತಿದೆ ನೋಡೋಣ.
ನಿಮ್ಮ ಈ-ಮೈಲ್ ಐಡಿ ಸಿಗಬಹುದಾ?
madhu - February 11, 2008 at 8:20 pm
blog chennagi bartha ide. hosa hosa baraha hegi bartha irli. all the best
srinidhi odilnala - February 12, 2008 at 2:07 pm
ನಾವಡರೇ,
ಕವನ ತುಂಬಾ ಮೆಚ್ಚುಗೆಯಾಯಿತು. ಸಾಗರನಿಗೆ ತೆರೆಯ ಆಪ್ಪುಗೆ! ಕಲ್ಪನೆ ನಿಜಕ್ಕೂ ಸುಂದರ. ನಿಮ್ಮಂತೆ ನನಗೂ ಈ ಕಡಲೆಂದರೆ ಅದಮ್ಯ ಪ್ರೀತಿ, ಮುಗಿಯದ ಕುತೂಹಲ. ಕೊನೆಯ ಸಾಲುಗಳು ತುಂಬಾ ಇಷ್ಟವದವು. ಇಂತಹ ಕವನಗಳಿಗಾಗಿ ಆಗಾಗ ನಾ ಇಲ್ಲಿಗೆ ಬರುತ್ತಿರುವೆ. ಬರೆಯುತ್ತಿರಿ.
ತೇಜಸ್ವಿನಿ ಹೆಗಡೆ - February 13, 2008 at 5:36 am
ತೇಜಸ್ವಿನಿಯವರೇ,
ಕವನ ಮೆಚ್ಚುಗೆಯಾದದ್ದಕ್ಕೆ ಧನ್ಯವಾದ. ಕಡಲಿನ ಸಾಧ್ಯತೆಯೇ ಅಂಥಾಂದ್ದು. ಎಲ್ಲರನ್ನೂ ಕಾಡುವಂಥದ್ದು. ದಯವಿಟ್ಟು ಹೀಗೇ ಬರ್ತಾ ಇರಿ. ವಾಸ್ತವವಾಗಿ ನಾನು ಕವಿಯಲ್ಲ. ಸುಮ್ಮನೆ ಪದ್ಯ ಬರೆಯಲು ಯತ್ನಿಸಿದ್ದೇನೆ.
ನಾವಡ
navada - February 13, 2008 at 8:47 am
ಕವನ ಇಷ್ಟ ಆಯ್ತು. ಚಂದ ಇದೆ. ಬರೆಯುತ್ತಿರಿ.
ಮನಸ್ವಿನಿ - February 13, 2008 at 2:56 pm
ಮನಸ್ವಿನಿಯವರೇ,
ಮೆಚ್ಚುಗೆ ನುಡಿಗಳಿಗೆ ಧನ್ಯವಾದ.
ನಾವಡ
navada - February 13, 2008 at 3:53 pm
kavite chennaag moodi barutte nimmimda
Vikram - February 14, 2008 at 2:32 am