ಅಳುವಿನ ಸಾಮಗಾನ
ಬರೀ ಕತ್ತಲು
ಅಂಗಳದಲ್ಲಿ ಯಾವ ಕುರುಹೂ ಇಲ್ಲ
ಪುಟ್ಟ ಪುಟ್ಟ ಚಪ್ಪಲಿಗಳು,
ಕುಂಟೋಬಿಲ್ಲೆಗೆ ಕೊರೆದ ಗೆರೆಗಳು
ಗೋಲಿ ಆಡಲಿಕ್ಕೆ ತೋಡಿದ ಗುಂಡಿಗಳು
ಹೋಗಲಿ, ಗೋಡೆಗೆ ಒರಗಿದ ಪುಟ್ಟ ಸೈಕಲ್
ಸಂಜೆಯಾಗಲಿ, ಬೆಳಗ್ಗೆಯಾಗಲಿ
ಬಾಗಿಲಲ್ಲಿ ಬಂದು ಕಾಯುವುದು ಬಿಟ್ಟರೆ
ಇನ್ಯಾವ ಕುರುಹೂ ಇಲ್ಲ
ಒಂದು ದಿನ
ಆ ಮನೆಯಲ್ಲಿ ಬೆಳಕು ಹೊತ್ತಿತು
ಅಳುವಿನ ಸದ್ದು
ಬೆಳಕಿನದ್ದೇ ಸದ್ದಿರಬೇಕು
ಎಂದುಕೊಂಡರು ಸುತ್ತಲಿನವರು
ಬೆಳಕು ಹೊತ್ತಿಕೊಂಡೇ ಇತ್ತು
ಅಂಗಳದಲ್ಲಿ ಒಂದೊಂದೇ
ಕುರುಹುಗಳು ಮೂಡ ತೊಡಗಿದವು
ಕಟ್ಟಿಕೊಂಡ ಕನಸುಗಳಿಗೆಲ್ಲಾ
ಅದರದ್ದೇ ಛಾಯೆ
ಬೆಳಕು ಉರಿಯುತ್ತಲೇ ಇತ್ತು
ಅಪರಿಚಿತನೊಬ್ಬ
ಅದೇ ಹಾದಿಯಲ್ಲಿ ಬಂದ
ಕಣ್ಣು ಕುಕ್ಕಿತು ಬೆಳಕು
ಅರೆಕ್ಷಣ ಕಣ್ಣು ಮುಚ್ಚಿ ನಿಂತ
ಏನನಿಸಿತೋ, ಮುಂದಕ್ಕೆ ಹೆಜ್ಜೆ ಇಟ್ಟ
ಮತ್ತೆ ಅಲ್ಲೀಗ ಕತ್ತಲೆ
ಅಳುವಿನ ಸಾಮಗಾನ
Loading...
ನಮಸ್ಕಾರ !
ಚಂಡಮದ್ದಳೆ ಸ್ವರ ಚೆನ್ನಾಗಿ ಬರ್ತಾ ಇದೆ..
ಅಳುವಿನ ಸಾಮಗಾನ ಇಷ್ಟವಾಯ್ತು..
ಅಪರಚಿತ ಬರಬಾರದಿದ್ದೆತ್ತೆನೋ…
Shiv - February 9, 2008 at 9:43 pm
ಅಯ್ಯೋ….
ಇದು ನೋವು ನೋವಿನ ಕವಿತೆ…
- ಚೇತನಾ
chetanachaitanya - February 10, 2008 at 4:16 am
ನಾವಡರೆ…
ಕವಿತೆ ಕಷ್ಟವಿದೆ, ತಿರುಳಿನೊಳಗೆ ನುಸುಳುವ ಹಾದಿ ತಿಳಿಯಲಿಲ್ಲವಾದರೂ ಬೆಳಕು ಮಾಯವಾಗಿ ಕತ್ತಲಾವರಿಸಿ ಅಳುವ ಧ್ವನಿಯೊಂದು ಮಾತನಾಡಿತು.
ಶಾಂತಲಾ - February 11, 2008 at 5:22 am
ಶಿವು ಅವರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದ. ಹೀಗೇ ಬರ್ತಾ ಇರಿ.
ಚೇತನಾರೇ,
ನೋವು ನೋವಿನ ಕವಿತೆಯೇ ಇದು.
ಶಾಂತಲಾರೇ,
ನನಗೆ ಸದಾ ಕಾಡುವ ಎರಡು ಇಮೇಜ್ ಗಳೆಂದರೆ ಕಡಲು ಮತ್ತು ಸಾವು. ಇದು ಬದುಕು ಮತ್ತು ಸಾವಿನ ಬಗೆಗಿನ ಪದ್ಯ. ವಾಸ್ತವವಾಗಿ ನಾನು ಕವಿಯಲ್ಲ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
ನಾವಡ
navada - February 11, 2008 at 7:30 am
ನಾವಡರೇ ನಮಸ್ಕಾರ, ನಿಮ್ಮ ಬ್ಲಾಗ್ ಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ಚೆನ್ನಾಗಿದೆ. ಆ ಮ್ಊಲಕ ಹಲವು ಕನ್ನಡ ಬ್ಲಾಗ್ ಗಳ ಪರಿಚಯವಾಯಿತು.
ದಿನವೂ ಬರುವೆ.
ನಿಮ್ಮ ಚಂದ್ರಶೇಖರ ಕುಳಮರ್ವ, ಮಂಗಳೂರಿನಿಂದ.
ಚಂದ್ರಶೇಖರ ಕುಳಮರ್ವ - February 11, 2008 at 6:24 pm
ಸ್ವಾಮಿ, ಕುಳಮರ್ವರೇ,
ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ. ನಿಮ್ಮ ಅಭಿಪ್ರಾಯಕ್ಕೂ ಥ್ಯಾಂಕ್ಸ್. ದಿನವೂ ಬನ್ನಿ.
ನಾವಡ
navada - February 12, 2008 at 8:49 am
samagana impagide, hage helidare tappadeeteno, belakannu apaharisidavage nannadondu gatti dikkarvirali…!!!
pbanagi - February 12, 2008 at 1:45 pm
sir namaste. kavithe kuda very super. ‘aluvina samagana’ nange thumba ista ayithu. hige sagali…..
srinidhi odilnala - February 12, 2008 at 2:15 pm
ಪದ್ಯ ಮೆಚ್ಚಿದ ಶ್ರೀನಿಧಿ ಮತ್ತು ಪ್ರವೀಣನಿಗೆ ಧನ್ಯವಾದ.
ನಾವಡ
navada - February 12, 2008 at 3:56 pm
ನಾವಡರೇ,
ಕತ್ತಲಿಂದ ಶುರುವಾಗಿ ಕತ್ತಲಲ್ಲೆ ಅಂತ್ಯಗೊಂಡ ಕವಿತೆ ಚೆನ್ನಾಗಿದೆ. ಕಷ್ಟವಿದೆ ಕೂಡ. ಯಾಕೋ ತುಂಬಾ ಇಷ್ಟ ಆಯ್ತು.
ಮನಸ್ವಿನಿ - February 13, 2008 at 3:01 pm
ಮನಸ್ವಿನಿಯವರೇ,
ನಿಮಗೆ ಇಷ್ಟವಾದದ್ದು ನನಗೆ ಖುಷಿಯಾಯಿತು.
ನಾವಡ
navada - February 13, 2008 at 3:52 pm
ಒಂದು ದಿನ
ಆ ಮನೆಯಲ್ಲಿ ಬೆಳಕು ಹೊತ್ತಿತು
ಅಳುವಿನ ಸದ್ದು
ಬೆಳಕಿನದ್ದೇ ಸದ್ದಿರಬೇಕು
ಎಂದುಕೊಂಡರು ಸುತ್ತಲಿನವರು
Oh Man! Oh Man!…..Superb. Expecting more from you.
Vikram - February 14, 2008 at 2:29 am
ಕೆಲವು ಕವನಕ್ಕೆ ನೊವು ಶರೀರವಾದರೆ.,ಇದು ತನ್ನ ತನುವಿನ ತುಮ್ಬ ನೊವು ತುಮ್ಬಿ ಅನುಭವಿಸುತ್ತಿರುವ ಕವನ, ಪದ್ಯ ಅಲ್ಲ.ಹೀಗೆ ಸಮ್ಭವಿಸಲಿ ಕವನಗಳು.
ಹರೀಶ ಜಿ.ಬಿ. - March 12, 2008 at 5:07 pm